     ಮೂಲದೊಡನೆ ಪರಿಶೀಲಿಸಿ

ಎಥೆನಾಲ್ ಅಮೀನುಗಳು

	ಅಮೈನೋ ಆಲ್ಕೊಹಾಲುಗಳು (ಹೈಡ್ರಾಕ್ಸಿ ಅಮೈನುಗಳು) ; ಹೈಡ್ರೋಜನ್ ಪರಮಾಣುಗಳಲ್ಲಿ ಕನಿಷ್ಠ ಪಕ್ಷ ಒಂದನ್ನಾದರೂ ರ್ಯಾಡಿಕಲ್ 2-ಹೈಡ್ರಾಕ್ಸೆಥಿಲೀನಿನಿಂದ (-ಅಊ2ಅಊ2ಔಊ) ಬದಲು ಮಾಡಿದಂಥ ಅಮೋನಿಯ (ಓಊ3) ಉತ್ಪನ್ನಗಳು. ಮೂರು ಎಥೆನಾಲ್ ಅಮೀನುಗಳಿವೆ. ಅವುಗಳ ದ್ರವೀಕರಣ ಬಿಂದು ಕಡಿಮೆ. ಬಣ್ಣವಿಲ್ಲದ ಘನವಸ್ತುಗಳು. ಜಲಾಭಿಮಾನಿಗಳು. ನೀರನ್ನು ಹೀರಿಕೊಂಡು ಗಟ್ಟಿಯಾದ ದ್ರವಗಳಂತಾಗುತ್ತವೆ. ವಿಶಿಷ್ಟವಾದ ಅಮೋನಿಯ ವಾಸನೆ ಹೊಂದಿದ್ದು ಪ್ರಬಲ ಪ್ರತ್ಯಾಮ್ಲಗಳಂತೆ ವರ್ತಿಸುವುವು. ನೀರು ಮತ್ತು ಆಲ್ಕೊಹಾಲಿನಲ್ಲಿ ದ್ರಾವ್ಯ, ಬೆಂಜಿûೀನ್ ಮತ್ತು ಈಥರಿನಲ್ಲಿ ಅಲ್ಪದ್ರಾವ್ಯ. ಎಥೆನಾಲ್ ಅಮೀನುಗಳ ಭೌತಗುಣಗಳನ್ನು ಪಟ್ಟಿ ಮಾಡಲಾಗಿದೆ. (ಪುಟ 921) ಎಥಿಲಿನ್ ಕ್ಲೊರೊ ಹೈಡ್ರಿನ್ನನ್ನು ಘನರೂಪದ ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಸುಟ್ಟ ಸುಣ್ಣದೊಡನೆ ಕಾಯಿಸಿದರೆ ಎಥಿಲೀನ್ 

			CH2

				 O

			CH2

ಆಕ್ಸೈಡ್ ಎಂಬ ವಸ್ತುವಾಗುತ್ತದೆ. ಇದನ್ನು ಪ್ರಬಲ ಅಮೋನಿಯ ದ್ರಾವಣದೊಡನೆ ಒತ್ತಡದಲ್ಲಿ ಕಾಯಿಸಿದರೆ ಎಥೆನಾಲ್ ಅಮೀನುಗಳಾಗುತ್ತವೆ. ಎಥಿಲೀನ್ ಆಕ್ಸೈಡಿನ ಪ್ರಮಾಣ ಹೆಚ್ಚಾಗಿದ್ದರೆ ಟ್ರೈ ಎಥೆನಾಲ್ ಅಮೀನೂ ಅಮೋನಿಯ ಪ್ರಮಾಣ ಹೆಚ್ಚಾಗಿದ್ದರೆ ಮನೊಸಂಯುಕ್ತವೂ ಲಭಿಸುತ್ತವೆ. ಎಥೆನಾಲ್ ಅಮೀನುಗಳು ಪ್ರಬಲ ಪ್ರತ್ಯಾಮ್ಲಗಳಂತೆ ವರ್ತಿಸುವುದರಿಂದ ಅನಿಲಮಿಶ್ರಣದಿಂದ ಇಂಗಾಲದ ಡೈಆಕ್ಸೈಡ್ ಹೈಡ್ರೋಜನ್ ಸಲ್ಫೈಡ್ ಮೊದಲಾದ ಆಮ್ಲೀಯ ಗುಣವಿರುವ ವಸ್ತುಗಳನ್ನು ಹೀರಿಕೊಳ್ಳುವುವು. ಅನಂತರ ಅಮೀನಿನ ದ್ರಾವಣವನ್ನು 50ಲಿ ಸೆಂ.ಗ್ರೇ. ಮೀರಿದ ಉಷ್ಣತೆಗೆ ಒಡ್ಡಿದರೆ ಹೀರಿಕೊಂಡಿದ್ದ ಆಮ್ಲೀಯ ಅನಿಲಗಳನ್ನು ಬಿಡುಗಡೆ ಮಾಡುವುದು. ಇದೇ ರೀತಿ ಆಮ್ಲೀಯ ಗುಣವುಳ್ಳ ಫೀನಾಲುಗಳನ್ನೂ ಬೇರ್ಪಡಿಸಬಹುದು. ಕೊಬ್ಬಿನ ಆಮ್ಲಗಳು ಎಥೆನಾಲ್ ಅಮೀನುಗಳೊಡನೆ ವರ್ತಿಸಿ ಸಾಬೂನುಗಳನ್ನು ಕೊಡುವುವು. ಮಾರ್ಜಕಗಳು, ಅಂಗರಾಗಗಳು ಮತ್ತು ಎಮಲ್ಷನ್ ಕಾರಿಗಳ ತಯಾರಿಕೆಯಲ್ಲಿ ಇಂಥ ಸಾಬೂನುಗಳು ವಿನಿಯೋಗವಾಗುತ್ತಿವೆ.					     
 (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ